Monday, November 10, 2014

ಬೀದರ್ ಕೋಟೆಯ ಬೆರಗು








ಬೀದರ್ ಕೋಟೆ



ಬೀದರ್ ಕೋಟೆಯ ಮಹಾದ್ವಾರ ಶಾರ್ಜಾ ದರವಾಜಾದ ಕಮಾನಿನ ಮೇಲೆ ಎಡ-ಬಲಕ್ಕೆ ಕಲ್ಲಿನಲ್ಲಿ ಕೆತ್ತಿದ ಹುಲಿಗಳ ಚಿತ್ರಗಳಿವೆ. ಕೋಟೆಯ ಒಳಗೆ ಕಾಲಿಡುತ್ತಲೇ ನಮ್ಮ ಕಣ್ಣಿಗೆ ಗಗನ್ ಮಹಲ್ ಕಾಣಿಸುತ್ತದೆ. ಈ ಗಗನ್ ಮಹಲ್ ಅರಸರ ವಾಸದ ಮನೆಯಾಗಿತ್ತು...



ಬೀದರ್ ಅಂದರೇನೆ ಹಾಗೆ. ಅದೊಂದು ಕೋಟೆ ಕೊತ್ತಲಗಳ, ಪ್ರಾಚೀನ ಇತಿಹಾಸವುಳ್ಳ, ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿದ ತಾಣ. ಇವುಗಳೆಲ್ಲವುಗಳಿಗೂ ಮುಕುಟ ಪ್ರಾಯದಂತಿಗೆ ಬೀದರ್‌ನ ಕೋಟೆ. ಈ ಕೋಟೆ, ಅರಮನೆ, ಸುಂದರ ಮಹಲು, ಬಸದಿ, ವಸ್ತುಸಂಗ್ರಹಾಲಯ, ಶಾಸನ ಹೀಗೆ ಮುಂತಾದ ಐತಿಹಾಸಿಕ ಸಂಪತ್ತುಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿದೆ.



ಬೀದರ್ ಕೋಟೆಯ ಮಹಾದ್ವಾರ ಶಾರ್ಜಾ ದರವಾಜಾದ ಕಮಾನಿನ ಮೇಲೆ ಎಡ-ಬಲಕ್ಕೆ ಕಲ್ಲಿನಲ್ಲಿ ಕೆತ್ತಿದ ಹುಲಿಗಳ ಚಿತ್ರಗಳಿವೆ. ಕೋಟೆಯ ಒಳಗೆ ಕಾಲಿಡುತ್ತಲೇ ನಮ್ಮ ಕಣ್ಣಿಗೆ ಗಗನ್ ಮಹಲ್ ಕಾಣಿಸುತ್ತದೆ. ಈ ಗಗನ್ ಮಹಲ್ ಅರಸರ ವಾಸದ ಮನೆಯಾಗಿತ್ತು. ಇದೊಂದು ಬಹುಮಹಡಿ ಕಟ್ಟಡ. ಇದಕ್ಕೆ ತರ್ಕಶ್ ಮಹಲ್, ಝನಾನಾ ಎಂಬ ಹೆಸರುಗಳೂ ಇವೆ.



ಈ ಕಟ್ಟಡದಲ್ಲಿ ನೂರಾರು ಕೊಠಡಿಗಳುಳ್ಳ ಒಂದು ದೊಡ್ಡ ನೆಲಮಹಡಿ ಇದ್ದು ಅದನ್ನು ಹಜಾರ ಮಹಲ್ ಎದು ಕರೆಯುತ್ತಾರೆ. ಗಗನ್ ಮಹಲ್ ಪಕ್ಕದಲ್ಲೇ ಇರುವ ಮಸೀದಿಯಲ್ಲಿ ಹದಿನಾರು ಕಂಬಗಳು ಸಾಲಾಗಿ ಇರುವುದರಿಂದ ಇದಕ್ಕೆ ಸೋಲಾಹ-ಕಂಬ ಮಸೀದಿಯೆಂದು ಕರೆಯುತ್ತಾರೆ. ಈ ಮಸೀದಿಯೂ 300 ಅಡಿ ಉದ್ದವಿದ್ದು ಒಳಗಡೆ 60 ಕಂಬಗಳಿವೆ. ಬಹುಮನಿ ಅರಸರು ಈ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು.



ರಂಗಿನ ಮಹಲ್

ರಂಗಿನ ಮಹಲ್ ಕಟ್ಟಡವು ಅಂದಿನ ಕಾಲದ ಅರಸರ ಅತಿಥಿ ಕೋಣೆಯಾಗಿತ್ತು. ಈ ಕಟ್ಟಡವನ್ನು ಪರ್ಶಿಯನ್ ಮತ್ತು ಬಿದ್ರಿ ಕಲೆಯನ್ನು ಬಳಸಿ ಕಟ್ಟಲಾಗಿದ್ದು, ಬರೀದ್ ಶಾಹ್‌ನಿಂದ ನಿರ್ಮಿಸಲ್ಪಟ್ಟಿದೆ. ಹತ್ತು ಹಲವು ಕೋಣೆಗಳಿಂದ 'ಟೀರವುಡ್‌' ಬಳಸಿ ಇದರ ಮಾಳಿಗೆ ಹಾಕಲಾಗಿದೆ. ಇನ್ನು ಇಲ್ಲಿರುವ ಗವಾನ ಮದರಸಾವು ಬಹುಮನಿ ಅರಸರ ಕಾಲದ 'ವಿದ್ಯಾಕೇಂದ್ರ' 1472ರಲ್ಲೇ ನಿರ್ಮಿತವಾಗಿದೆ.



ಬೀದರ್‌ನ ಈ ಕೋಟೆಗೆ ಬಹುದೊಡ್ಡ ಇತಿಹಾಸವಿದೆ. ಬಹುಮನಿ ಸಾಮ್ರಾಜ್ಯದ 9ನೇ ಅರಸನು 1429ರಲ್ಲಿ ತನ್ನ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದನು. ರಾಜಧಾನಿಯನ್ನು ವೈರಿಗಳಿಂದ ರಕ್ಷಿಸಲು ಈ ಕೋಟೆ ಕಟ್ಟಿಸಿದನು. ಈ ಕೋಟೆಯು 35 ಕಿ.ಮೀ ಉದ್ದ ಹಾಗೂ 19 ಕಿ.ಮೀ ಅಗಲ ಸುತ್ತಳತೆ ಹೊಂದಿದೆ. ಮುಂದೆ ಈ ಕೋಟೆ 1658ರಲ್ಲಿ ಮೊಘಲರ ವಶಕ್ಕೆ ಸೇರಿತ್ತು. ನಂತರ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು, ಅಂತಿಮವಾಗಿ ನವೆಂಬರ್ 1, 1956ರಂದು ಅಧಿಕೃತವಾಗಿ ಮೈಸೂರು ರಾಜ್ಯಕ್ಕೆ ಒಳಪಟ್ಟಿತು.



source:http://www.kannadaprabha.com/supplements/travel-automobile/bidar-fort/242354.html

No comments:

Post a Comment