24ಗಂಟೆಗಳ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಬೀದರ ನಗರ ಹಳೆ ಭಾಗಕ್ಕೆ ವಿಸ್ತರಿಸಲು 15 ಕೋಟಿ ರೂ. ಹೆಚ್ಚುವರಿ ಹಣ ಮಂಜೂರಾತಿಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತಾ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಕೆಯುಐಡಿಎಫ್‌ಸಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರಂಜಾ ಜಲಾಶಯದಿಂದ ಬೀದರ ನಗರದ ಟ್ಯಾಂಕರ್‌ಗಳಿಗೆ ನೀರು ಸರಬರಾಜಿಗೆ 29 ಕೋಟಿ ರೂ. ಮತ್ತು ನಗರದಲ್ಲಿ ಮನೆ ಮನೆಗಳಿಗೆ ನೀರು ಪೂರೈಕೆ ಕಾಮಗಾರಿಗೆ 25 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿದೆ ಎಂದು ಹೇಳಿದರು.
ನಗರದಲ್ಲಿ ಉಳಿದ ಹಳೆ ಭಾಗದ ಪ್ರದೇಶಗಳಿಗೂ ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಉನ್ನತಾಧಿಧಿಕಾರಿಗಳ ಸಮಿತಿ ಸಭೆಯಲ್ಲಿ ಮಂಜೂರಾತಿ ಸಿಕ್ಕಿದೆ. ಕಲಬುರ್ಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ. 24 ಗಂಟೆಗಳ ನಿರಂತರ ಕುಡಿಯುವ ನೀರಿನ ಯೋಜನೆಯನ್ನು 5 ಪಟ್ಟಣಗಳಲ್ಲಿ ಸಂಪೂರ್ಣ ಪ್ರದೇಶ, 9 ಪಟ್ಟಣಗಳಲ್ಲಿ ಶೇ. 50ರಷ್ಟು ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಅದೇ ರೀತಿ ಮೂರು ಹಂತಗಳಲ್ಲಿ ಸುಮಾರು 39.8 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿಗಳು ನಡೆಯುತ್ತಿದ್ದು, ಅದರಲ್ಲಿ 15 ಕೊಟಿ ರೂ. ಮಂಜೂರಾಗಿದೆ. ನಗರದಲ್ಲಿ ನೀರು ಸರಬರಾಜು ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ನಗರ ನೀರು ಒಳಚರಂಡಿಗೆ ಬಿಡುಗಡೆಯಾಗಿರುವ 29 ಕೋಟಿ ರೂ. ಅನುದಾನ ಯುಜಿಡಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಬಳಚರಂಡಿ ಮತ್ತು ನೀರು ಸರಬರಾಜು ಪೈಪ್ ಲೈನ್ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಧಿತ ಗುತ್ತಿಗೆದಾರರಿಗೆ 80 ಲಕ್ಷ ರೂ. ದಂಡ ವಿಧಿಧಿಸಿ, 6 ತಿಂಗಳೊಳಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿಗಳು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಪೈಪ್‌ಗ್ಳು ತೆಳುವಾಗಿದ್ದ ಕಾರಣ ಕಾಮಗಾರಿ ಆರಂಭದಲ್ಲಿ ವಿಳಂಬವಾಗಿತ್ತು ಎಂದು ಮಾಹಿತಿ ನೀಡಿದರು.
ನಗರದ ಹೊರವಲಯದ ನೌಬಾದ್‌ನಲ್ಲಿ ಸ್ಥಾಪಿಸಿರುವ ಆಟೋ ನಗರ ಭಾರಿ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಫ್ರಾಬ್ರಿಕೇಶನ್ ಯುನಿಟ್ ಮತ್ತು ಮಂಡಕ್ಕಿ ಫ್ಯಾಕ್ಟರಿಗಳನ್ನು ನಗರದ ಹೊರಗಡೆ ಆರಂಭಿಸಲು ಚಿಂತನೆ ನಡೆದಿದೆ. ಅದಕ್ಕಾಗಿ ಜಿಲ್ಲಾಡಳಿಕ್ಕೆ ಕೆಯುಐಡಿಎಫ್‌ಸಿ ಅಗತ್ಯ ಸಹಾಯ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.
source:
http://kannada.yahoo.com/%E0%B2%95-%E0%B2%A1-%E0%B2%AF-%E0%B2%B5-%E0%B2%A8-100623951.html;_ylt=AiUXE5Z6eStl7s54EORxKtfupe5_;_ylu=X3oDMTRjZjNvYmRpBG1pdANCaWRhciBNb2R1bGUgU3RvcnlsaXN0BHBrZwNiZGYxNmY4ZS1hZmNhLTMyMjYtODMzYS0wNmY3YTcwOGYyOTIEcG9zAzEwBHNlYwNNZWRpYVN0b3J5TGlzdExQVGVtcAR2ZXIDMmE2MTFjMDAtMDQ5ZC0xMWUyLWJlN2YtNmZiYWI3ZDcyYzRm;_ylg=X3oDMTJldmZlNjBlBGludGwDaW4EbGFuZwNrbi1pbgRwc3RhaWQDBHBzdGNhdANob21lfOCynOCyv.CysuCzjeCysuCzhuCyl.Cys.CzgQRwdANzZWN0aW9ucw--;_ylv=3
No comments:
Post a Comment