Tuesday, September 25, 2012

ಸೋಮಾರಿಗಳಿಗೆ ಮಾದರಿ ಪಂಡಿತ ಮೇತ್ರೆ


ಔರಾದ: ಅಂಗವೈಕಲ್ಯ ತನಗೇ ಸಮಸ್ಯೆಯಲ್ಲ. ತಾನು ಯಾರಿಗಂತೂ ಕಮ್ಮಿಯಿಲ್ಲ. ಪರಾವಲಂಬಿಯಾಗದೇ ಸ್ವಾಭಿಮಾನಿ ಜೀವನ ನಡೆಸಬಲ್ಲೆ ಎಂದು ತೋರಿಸಿ ಕೊಡುವ ವ್ಯಕ್ತಿಯೊಬ್ಬ ಸೋಮಾರಿಗಳಿಗೆ ಮಾದರಿಯಾಗಿದ್ದಾನೆ. ಹೌದು, ಇಂಥ ಮಾದರಿ ಜೀವನ ತೋರಿಸಿಕೊಟ್ಟವನು ಪಂಡಿತ ಮೇತ್ರೆ.

ಪಟ್ಟಣದ ಕನಕ ಬಡಾವಣೆಯ ಈತನಿಗೆ ಹುಟ್ಟಿನಿಂದಲೂ ಅಂಗವೈಕಲ್ಯ. ತಂದೆ ಶಾಮರಾವ, ತಾಯಿ ತೇಜಮ್ಮರ ಹಿರಿಮಗ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕುಟುಂಬದ ಜವಾಬ್ದಾರಿ ಸಹಿತ ಮೈಮೇಲೆ. ಅದಕ್ಕೆ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸ, ತಂಗಿ ವಿವಾಹ ಮಾಡಿ ಮುಗಿಸಿದ್ದಾನೆ. ಅದು ಹಿರಿಯಣ್ಣನ ಕರ್ತವ್ಯವೂ ಹೌದು.

ಹತ್ತನೇ ತರಗತಿ ಓದಿರುವ ಪಂಡಿತ ಮೇತ್ರೆ ತನ್ನ ಸೈಕಲ್‌ ಮೂಲಕ ಪಟ್ಟಣದ ವ್ಯಾಪಾರಿ ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಾನೆ. ಅವರು ಕೊಡುವ ಹಣ ಕುಟುಂಬ ನಿರ್ವಹಣೆಗೆ ಬಳಸುತ್ತಾನೆ. ಜೊತೆಗೆ ಬೇಸಿಗೆಯಲ್ಲಿ ಐಸ್‌ಕ್ರೀಮ್‌ ಮಾರುತ್ತಾನೆ.

ಬೇರೆಯವರಂತೆ ಓದಬೇಕೆಂಬ ಹಂಬಲವಿತ್ತು. ಬಡತನ ಓದಿಗೆ ಅಡ್ಡಿಯಾಯಿತು. ಅದಕ್ಕೆ ಅನಿವಾರ್ಯವಾಗಿ ಯಾವುದೇ ಕೆಲಸದಲ್ಲಿ ತೊಡಗಬೇಕಾಗಿತ್ತು. ಅದಕ್ಕೆ ವ್ಯಾಪಾರಿ ಅಂಗಡಿಗಳಿಗೆ ದಿನಸಿ ಸಾಮಾನು ಪೂರೈಸುತ್ತೇನೆ. ಸಮಾಜದಲ್ಲಿ ನನಗೆ ಅನುಕಂಪ ಬೇಡ. ಒಂದು ಅವಕಾಶ ಸಿಕ್ಕರೆ ಸಮರ್ಪಕವಾಗಿ ಮಾಡುತ್ತೇನೆ ಎಂದು ಪಂಡಿತ ಹೇಳುತ್ತಾನೆ.

ಅಂಗವೈಕಲ್ಯ ಮೀರಿ ಜೀವನ ಉತ್ಸಾಹ ಬೆಳೆಸಿಕೊಂಡಿರುವ ಈತ ಇನ್ನುಳಿದ ಯುವಕರಿಗೆ ಮಾದರಿ.

source: http://kannada.yahoo.com/%E0%B2%B8-%E0%B2%AE-%E0%B2%B0-%E0%B2%97%E0%B2%B3-%E0%B2%97-100624866.html;_ylt=AqD6RhtZYiuyFg2nXusRVm_upe5_;_ylu=X3oDMTRib2w5Y2plBG1pdANCaWRhciBNb2R1bGUgU3RvcnlsaXN0BHBrZwMzMmUxMzhjZi1kMzNmLTNhYzUtOTVkZi1mMjJhNzQyYmY0YWYEcG9zAzcEc2VjA01lZGlhU3RvcnlMaXN0TFBUZW1wBHZlcgMyYTc1Njc1MC0wNDlkLTExZTItYjlmYi01MmU0NWFhMGJkN2M-;_ylg=X3oDMTJldmZlNjBlBGludGwDaW4EbGFuZwNrbi1pbgRwc3RhaWQDBHBzdGNhdANob21lfOCynOCyv.CysuCzjeCysuCzhuCyl.Cys.CzgQRwdANzZWN0aW9ucw--;_ylv=3