Monday, May 21, 2018

ಚಿಟಗುಪ್ಪ: ಸೋಲಾರ್‌ ಪ್ಲಾಟ್‌ಗೆ ಬೆಂಕಿ

Source: Vijaya Karnataka

ಚಿಟಗುಪ್ಪ: ಸೋಲಾರ್‌ ಪ್ಲಾಟ್‌ಗೆ ಬೆಂಕಿ
ಚಿಟಗುಪ್ಪ : ಪಟ್ಟಣದ ಹೊರ ವಲಯದ ನಾನಾ ಹಜರತ್‌ ದರ್ಗಾ ಬಳಿಯ ಸೋಲಾರ್‌ ಪ್ಲಾಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಯಂತರ ಮೊತ್ತದ ಕೇಬಲ್‌ (ವೈಯರ್‌) ಬಂಡಲ್‌ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.

ಇಲ್ಲಿನ ಕೇಬಲ್‌ ವೈಯರ್‌ ಬಂಡಲ್‌ಗಳಿಗೆ ಬೆಂಕಿ ತಗುಲಿದ್ದರಿಂದ ಬೇಸಿಗೆ ಬಿಸಿಲಿನ ಪ್ರಖರತೆಯಿಂದ ಮತ್ತಷ್ಟು ಬೆಂಕಿ ಕೆನ್ನಾಲಗೆ ಚಾಚಿತ್ತು. ತಕ್ಷಣವೇ ಧಗಧಗನೆ ಹೊತ್ತಿ ಉರಿಯುತ್ತಿದ್ದರಿಂದ ಹತೋಟಿಗೆ ತರಲು ಅಗ್ನಿ ಶಾಮಕದ ಸಿಬ್ಬಂದಿಗಳು ಹರ ಸಾಹಸ ಪಟ್ಟರು.

ಚಿಟಗುಪ್ಪ, ಹುಮನಾಬಾದ ಹಾಗೂ ಬೀದರನ ಅಗ್ನಿ ಶಾಮಕ ಠಾಣೆಯ ತಲಾ ಒಂದೊಂದು ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ನಿರತರಾದರು. ಬೆಂಕಿ ತಗುಲಿರುವುದು ಹೇಗೆ ಎಂಬುದು ತಿಳಿದು ಬಂದಿಲ್ಲ.ಸ್ಥಳಕ್ಕೆ ಚಿಟಗುಪ್ಪ ಪಿಎಸ್‌ಐ ಪ್ರಕಾಶ ಯಾತನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದರ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಂಡಿ ಮುಜಬುಲ್‌ ಪಟೇಲ, ಹುಮನಾಬಾದ ಠಾಣಾಧಿಕಾರಿ ಚಂದ್ರಶೇಖರ ರಡ್ಡಿ, ಚಿಟಗುಪ್ಪ ಸಹಾಯ ಅಗ್ನಿ ಶಾಮಕ ಠಾಣಾಧಿಕಾರಿ ರಾಮಪ್ಪ ಸೇರಿ ಹುಮನಾಬಾದ, ಚಿಟಗುಪ್ಪ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಅಗ್ನಿ ನಂದಿಸುವಲ್ಲಿ ಹಾಜರಿದ್ದರು.

Source: https://vijaykarnataka.indiatimes.com/district/bidar/chitaguppa-fire-to-solar-plate/articleshow/64237494.cms


" Twitter: #BidarInfo (@BidarInfo) "

No comments:

Post a Comment