Wednesday, March 7, 2018

ಬೀದರ್‌ಗೆ 184 ಹೊಸ ಬಸ್‌ಗಳು


ಬೀದರ್‌ಗೆ 184 ಹೊಸ ಬಸ್‌ಗಳು: ಬುಳ್ಳಾಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 184 ಹೊಸ ಬಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ್‌ ಬುಳ್ಳಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಶರ್‌ ಕಂಪೆನಿಯ ಬಿಎಸ್‌3 ಮಾದರಿಯ 30, ಎಚ್‌ಕೆಡಿಬಿಯ 10, ಈಶರ್‌ನ ಬಿಎಸ್‌4 ಮಾದರಿಯ 76, ಅಶೋಕ್‌ ಲೇಲ್ಯಾಂಡ್‌ನ ಬಿಎಸ್‌ 4ನ 50, ರಾಜಹಂಸ 14 ಹಾಗೂ ನಾನ್‌ ಎಸಿ ಸ್ಲೀಪರ್‌ 4 ಬಸ್‌ಗಳು ಸೇರಿ ಒಟ್ಟು 184 ಬಸ್‌ಗಳಿವೆ ಎಂದರು.

ಬೀದರ್‌-1 ಡಿಪೊಗೆ 33, ಬೀದರ್‌-2 ಡಿಪೊಗೆ 25, ಹುಮನಾಬಾದ್‌ ಡಿಪೊಗೆ 32, ಬಸವಕಲ್ಯಾಣದ ಡಿಪೊಗೆ 32, ಭಾಲ್ಕಿ ಡಿಪೊಗೆ 34 ಹಾಗೂ ಔರಾದ್‌ ಡಿಪೊಗೆ 28 ಬಸ್‌ಗಳನ್ನು ನೀಡಲಾಗಿದೆ ಎಂದು ಬಸವರಾಜ್‌ ಬುಳ್ಳಾ ತಿಳಿಸಿದರು.

14 ಹೊಸ ರಾಜಹಂಸ ಬಸ್‌ಗಳ ಪೈಕಿ 6 ಬಸ್‌ಗಳು ವಾಯಾ ಹೈದರಾಬಾದ್‌ ಮೂಲಕ ಬೆಂಗಳೂರಿಗೆ ಕಾರ‍್ಯಚರಣೆ ನಡೆಸುತ್ತಿವೆ. ಜತೆಗೆ ಬೀದರ್‌-ಬೆಂಗಳೂರು, ಬಸವಕಲ್ಯಾಣ-ಬೆಂಗಳೂರು, ಔರಾದ್‌-ಬೆಂಗಳೂರು, ಎರಡು ರಾಜಹಂಸ ಬಸ್‌ಗಳು ಬೀದರ್‌-ಶಿರಡಿ ಹಸೊ ಮಾರ್ಗದಲ್ಲಿ ಓಡುತ್ತಿವೆ. ಇನ್ನು ಆರು ರಾಜಹಂಸಗಳು ಬೀದರ್‌- ಕಲಬುರಗಿ ಮಾರ್ಗದಲ್ಲಿ ತಡೆರಹಿತ ಸಾರಿಗೆ ಸೇವೆ ನೀಡಲಿವೆ ಎಂದರು.

ನಾಲ್ಕು ನಾನ್‌ ಎಸಿ ಸ್ಲೀಪರ್‌ ವಾಹನಗಳ ಪೈಕಿ ಎರಡು ವಾಹನಗಳು ಭಾಲ್ಕಿ-ಬೆಂಗಳೂರು ಮಾರ್ಗದಲ್ಲಿ ಕಾರ‍್ಯಚರಣೆ ಮಾಡುತ್ತಿದ್ದರೆ, ಇನ್ನುಳಿದ ಎರಡು ಬೀದರ್‌- ಬೆಂಗಳೂರು ಮಾರ್ಗದಲ್ಲಿ ಕಾರಾರ‍ಯಚರಣೆ ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

2017-18ನೇ ಸಾಲಿನಲ್ಲಿ ಈ ವರೆಗೆ 128 ವಾಹನಗಳನ್ನು ನಿಷ್ಕ್ರೀಯಗೊಳಿಸಲಾಗಿದ್ದು, ಇನ್ನು 86 ಬಸ್‌ಗಳನ್ನು ನಿಷ್ಕ್ರೀಯಗೊಳಿಸುವ ಯೋಜನೆಯಿದೆ ಎಂದರು. ನಾಲ್ಕು ಹೊಸ ಐರಾವತ ಮಲ್ಟಿ ಎಕ್ಸಲ್‌ ವಾಹನಗಳನ್ನು ಬೀದರ್‌-ಬೆಂಗಳೂರು ವಾಯಾ ಹೈದರಾಬಾದ್‌ ಹಾಗೂ ಬಸವಕಲ್ಯಾಣ-ಬೆಂಗಳೂರು ವಾಯಾ ಬಳ್ಳಾರಿ ಓಡಿಸಲಾಗುತ್ತದೆ ಎಂದರು. ಈ ವೇಳೆ, ಕಾಂಗ್ರೆಸ್‌ನ ಯುವ ಮುಖಂಡ ಆನಂದ್‌ ದೇವಪ್ಪ ಇದ್ದರು.Source: https://vijaykarnataka.indiatimes.com/district/bidar/184-new-buses-to-bidar-bulla/articleshow/63114430.cms
" Twitter: #BidarInfo (@BidarInfo) "

No comments:

Post a Comment