Tuesday, August 4, 2015

ರಾಯಚೂರು ವಲಯ ಕ್ರಿಕೆಟ್‌‌: ಬೀದರ್‌ಗೆ ಭರ್ಜರಿ ಜಯ


Source: Enaadu India .



Published 04-Aug-2015 10:04 IST

 ಭಾನುವಾರ ಹಾಗೂ ಸೋಮವಾರ ಬೀದರ್‌ನ ನೆಹರು ಕ್ರಿಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್‌‌ ಸಂಸ್ಥೆ, ರಾಯಚೂರು ವಲಯದ ಒಂದನೇ ಆವೃತ್ತಿಯ ಎರಡು ದಿನದ ಕ್ರಿಕೆಟ್‌‌ ಪಂದ್ಯಾವಳಿಯಲ್ಲಿ ಟಾಸ್‍ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜೈ ವಿಜಯ ರಾಯಚೂರು ಕ್ರಿಕೆಟ್‌‌ ತಂಡ ಮೊದಲ ಇನ್ನಿಂಗ್ಸ್‌‌ನಲ್ಲಿ 175ರನ್‍ಗಳಿಗೆ ಸರ್ವಪತನಗೊಂಡಿತು.

ನಂತರ ಬ್ಯಾಟಿಂಗ್‌‌ ಆರಂಭಿಸಿದ ಗಜಾನನ ಕ್ರಿಕೆಟ್‌‌ ತಂಡ ಮೊದಲ ಇನ್ನಿಂಗ್ಸ್‌‌ನಲ್ಲಿ 379ರನ್ ಗಳಿಸಿದರು. ತಂಡದ ಪರವಾಗಿ ಪೃಥ್ವಿರಾಜ 114 ರನ್, ಕೇದಾರನಾಥ 72ರನ್, ಸಲೀಮ್ ಅಖ್ತರ್‌‌ 45ರನ್ ನಿತಿನ್‌‌ 34ರನ್‍ ಗಳಿಸಿ ಗಜಾನನ ಕ್ರಿಕೆಟ್‌‌ ಕ್ಲಬ್ ಮೊದಲ ಇನಿಂಗ್ಸ್‌‌ನಲ್ಲಿ ಮುನ್ನಡೆ ಪಡೆಯಿತು.

ಎರಡನೇ ಇನಿಂಗ್ಸ್ ಆಡಲು ಇಳಿದ ಜೆ.ವಿ.ಸಿ ರಾಯಚೂರು ತಂಡ 190 ರನ್‍ಗಳಿಗೆ ತನ್ನ ಎಲ್ಲಾ ವಿಕೆಟ್‌‌ ಕಳೆದುಕೊಂಡು ಇನಿಂಗ್ಸ್ ಹಾಗೂ 14 ರನ್‍ಗಳ ಹೀನಾಯ ಸೋಲು ಕಂಡಿತು. ಬೀದರ್‌‌ ತಂಡದ ಪರವಾಗಿ ವಿಕ್ಕಿ ಅತವಾಳ 3, ಪೃಥ್ವಿರಾಜ 2, ಯುವರಾಜ ಉಣ್ಣೆ 2 ವಿಕೆಟ್‌‌ ಪಡೆದು ಸಂಭ್ರಮಿಸಿದರು.

ಲಕ್ಷ್ಮಿಕಾಂತ್ ಆಗಮನದ ಬಳಿಕ ರಾಯಚೂರಿನ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡುವ ಸಾಧ್ಯತೆ ಇದೆ. ಲಕ್ಷ್ಮಿಕಾಂತ್ ವಾಪಸಾದ ಬಳಿಕ ಜನದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪಶ್ಚಿಮ ಠಾಣೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಚನೆ ನೀಡಿದ್ದಾರೆ.

Source:http://kannada.eenaduindia.com/Sports/Cricket/2015/08/04100409/Raichur-Zone-Cricket-Bidar-team-won-the-match.vpf

" Twitter: #BidarInfo (@BidarInfo) "

No comments:

Post a Comment