Tuesday, October 1, 2013

ನಿರ್ಲಕ್ಷ್ಯಕ್ಕೆ ಗುರಿಯಾದ ಬರೀದ್ ಶಾಹಿ ಆವರಣ

ಸಂಜೆ ಬಿಸಿಲ ಹಿನ್ನೆಲೆಯಲ್ಲಿ ಬರೀದ್ ಶಾಹಿ ಗೋರಿಯ ನೋಟ






ಬೀದರ್: ಅಲ್ಲಲ್ಲಿ ಕಸ, ತ್ಯಾಜ್ಯಗಳು, ಪ್ರಕೃತಿ ಕರೆಗೆ ಸ್ಪಂದಿಸುವ ತಾಣವಾಗಿ ಬದಲಾಗಿರುವ ಸೂಚನೆಯಾಗಿ ಶೌಚದ ವಾಸನೆ, ಪಾದಚಾರಿ ರಸ್ತೆಗಳನ್ನು ಆವರಿಸಿಕೊಂಡು ಬೆಳೆದಿರುವ ಕಳೆ, ಕಿತ್ತುಬಂದಿರುವ ಕರೆ, ಆಟದ ಅಂಗಳವಾಗಿಯೂ ಬದಲಾಗಿರುವ ತಾಣ.

ನಗರದ ಹೃದಯ ಭಾಗದಲ್ಲಿರುವ ಬರೀದ್ ಶಾಹಿ ಅವರ ಗೋರಿ (ಟೋಂಬ್) ಇರುವ ಸಂರಕ್ಷಿತ ಪ್ರದೇಶದ ದುಃಸ್ಥಿತಿ ಇದು. ಬೆಳಗಿನ ಹೊತ್ತು ವಾಯು ವಿಹಾರಕ್ಕಾಗಿ ಬರುವ ಸಾರ್ವಜನಿಕರು ಈ ಕಿರಿಕಿರಿಗಳನ್ನು ಸಹಿಸಿ ಕೊಳ್ಳುವುದು ಅನಿವಾರ್ಯವಾಗಿದೆ.

ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಗೆ ಈ ಪ್ರದೇಶ ಸೇರುತ್ತದೆ. ರಸ್ತೆಯ ಇನ್ನೊಂದು ಅಭಿಮುಖದಲ್ಲಿ ಇರುವ ಬರೀದ್ ಶಾಹಿ ಉದ್ಯಾನದ ಉತ್ತಮ ನಿರ್ವಹಣೆಯಿಂದ ಗಮನಸೆಳೆದರೆ; ಬರೀದ್ ಶಾಹಿ ಗುಂಬಜ್ ಇರುವ ಪ್ರದೇಶ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು ನಿರ್ವಹಣೆ ಕೊರತೆ ಇದೆ.

ಬಸ್ ನಿಲ್ದಾಣದಲ್ಲಿಯೇ ಪಕ್ಕದಲ್ಲಿಯೇ ಇರುವ ಈ ಪ್ರದೇಶಕ್ಕೆ ಆಸುಪಾಸಿನ ಗುರುನಗರ, ಗುರುನಾನಕ್ ಬಡಾವಣೆ, ಶಿವನಗರ, ದೇವಿ ಕಾಲೋನಿ, ಆದರ್ಶನಗರ ಭಾಗದ ನಿವಾಸಿಗಳು ವಾಯು ವಿಹಾರಕ್ಕೆ ಬರುತ್ತದೆ.

ಅನೇಕ ವಯಸ್ಕರು, ಮಹಿಳೆಯರು ಬರುತ್ತಾರೆ. ಆದರೆ, ಬರೀದ್ ಶಾಹಿ ಆವರಣ­ದಲ್ಲಿ, ಟ್ಯಾಕ್ಸಿ ನಿಲ್ದಾಣಕ್ಕೆ ಹೊಂದಿ ಕೊಂಡಿರುವ ಪ್ರದೇಶದಲ್ಲಿ ಬಯುಲು ಶೌಚಾ­ಲಯ ಆಗಿ ಬಳಕೆ ಆಗಲಿದೆ. ವಾಸನೆಯಿಂದಾಗಿ ಓಡಾ­ಡುವುದು ಕಷ್ಟ ಆಗಲಿದೆ ಎನ್ನುತ್ತಾರೆ ಗುರು­ನಗರದ ನಿವಾಸಿ ಶಂಕರರಾವ್ ದೊಡ್ಡಿ.

ಹಗಲಿನ ಹೊತ್ತು ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದಂತೆ ಈ ಪ್ರದೇಶ ಇರುತ್ತದೆ. ಒಮ್ಮೆ ಒಳಗೆ ಹೋದರೆ ಕೆಲವು ವಿದ್ಯಾರ್ಥಿಗಳು ಗಂಭೀರವಾಗಿ ಓದಿನಲ್ಲಿ ತೊಡಗಿರುವುದು ಕಾಣುತ್ತದೆ. ಅಷ್ಟಕ್ಕೆ ಸಂತಸ ಪಡುವಂತಿಲ್ಲ.

ಸುತ್ತಾ ಕಣ್ಣಾಡಿದರೆ, ಕೆಲವರು ಇನ್ನೂ ಗಂಭೀರವಾಗಿ ಜೂಜು ಆಟದಲ್ಲಿ ತೊಡಗಿರು­ತ್ತಾರೆ; ಹುಡುಗರ ಗುಂಪೊಂದು ಪ್ರಾಚ್ಯ ವಸ್ತುಗಳ ಇಲಾಖೆ ಸುಪರ್ದಿಯಲ್ಲಿರುವ ಸಂಕೀರ್ಣದ ಗೋಡೆಯನ್ನೇ ವಿಕೆಟ್ ಆಗಿಸಿ ಕ್ರಿಕೆಟ್ ಆಡುತ್ತಿರುತ್ತಾರೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿ­ಸಿದರೆ ಕೆಲ ಜೋಡಿಗಳು ಕಾಣಿಸಬಹುದು. ಇಲ್ಲಿ ವಾಯು ವಿಹಾರಕ್ಕೆ ಆಗಮಿಸುವ ಶಿವನಗರ ನಿವಾಸಿ ರಾಜಶೇಖರ್ ಪಾಟೀಲ ಅವರು, ಈ ಸ್ಥಳದ ಮಹತ್ವ ಗಮನಿಸಿ­ಯಾದರೂ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ. ಇಂಥದೇ ಪರಿಸ್ಥಿತಿ ಮುಂದುವರಿದರೆ ಜನರು ಇಲ್ಲಿಗೆ ವಾಯುವಿಹಾರಕ್ಕೆ ಬರುವುದನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ದೊಡ್ಡಿ ಅವರು.

ಈ ಹಿಂದೆ ಹರ್ಷಗುಪ್ತಾ ಅವರ ಅವಧಿಯಲ್ಲಿ ಈ ಪ್ರದೇಶವನ್ನು ಸರಂಕ್ಷಿಸಿ, ಹೊಸ ರೂಪ ನೀಡುವ ಯತ್ನ ನಡೆದಿತ್ತು. ಈಗ ಆ ಕುರಿತ ಚಿಂತನೆ ಕಾಣುತ್ತಿಲ್ಲ ಎಂದು ವಿಷಾದಿಸುತ್ತಾರೆ.

ಕನಿಷ್ಠ ಈ ಪ್ರದೇಶದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಂತೆ ತಡೆಯಲು ಕಾವ­ಲು­ಗಾರರನ್ನು ನೇಮಿಸುವ ಚಿಂತನೆ­ಯಾದರೂ ನಡೆಯಬೇಕಿದೆ.
ಜೊತೆಗೆ, ಪಾದ­ಚಾರಿ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಬೇಕಾಗಿದೆ.

ಪ್ರಾಚ್ಯವಸ್ತುಗಳ ಇಲಾಖೆಗೆ ಸೇರಿದರೂ ಈ ಭಾಗದ ರಕ್ಷಣೆ, ಸುಸ್ಥಿತಿಯಲ್ಲಿ ಇಡುವತ್ತ ನಗರ­ಸಭೆ, ಜಿಲ್ಲಾಡಳಿತವು ಗಮನಹರಿಸಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ..

ಬರೀದ್ ಶಾಹಿ ಗೋರಿ ಇರುವ ಆವರಣದ ಒಳಗೆ ಅಲ್ಲಲ್ಲಿ ಕಂಡು ಬರುವ ಚಿತ್ರ ಇದು

source:http://www.prajavani.net/article/%E0%B2%A8%E0%B2%BF%E0%B2%B0%E0%B3%8D%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AF%E0%B2%95%E0%B3%8D%E0%B2%95%E0%B3%86-%E0%B2%97%E0%B3%81%E0%B2%B0%E0%B2%BF%E0%B2%AF%E0%B2%BE%E0%B2%A6-%E0%B2%AC%E0%B2%B0%E0%B3%80%E0%B2%A6%E0%B3%8D-%E0%B2%B6%E0%B2%BE%E0%B2%B9%E0%B2%BF-%E0%B2%86%E0%B2%B5%E0%B2%B0%E0%B2%A3

No comments:

Post a Comment