ಸೈಕಲ್ ಮೇಲೆ 24 ರಾಜ್ಯಗಳ ಪ್ರವಾಸ ಕೈಗೊಂಡಿರುವ ಸವಾರರೊಬ್ಬರು ಗುರುವಾರ ಬೀದರ್ ನಗರಕ್ಕೆ ಆಗಮಿಸಿದ್ದಾರೆ.
`ಐದು ವರ್ಷದಿಂದ ಸೈಕಲ್ ಯಾತ್ರೆ ಕೈಗೊಂಡಿದ್ದೇನೆ' ಎಂದು ನಗರಕ್ಕೆ ಆಗಮಿಸಿದ್ದ ಬೆಂಗಳೂರು ಜಿಲ್ಲೆಯ ಚಿಕ್ಕತಿರುಪತಿ ಗ್ರಾಮದ ನಿವಾಸಿ ಅಮನ್‌ದೀಪ ಸಿಂಗ್ ಗುರುವಾರ ಪ್ರತಿಕ್ರಿಯಿಸಿದರು.
ಇವರು ಮೂಲತಃ ವೃತ್ತಿಯಲ್ಲಿ ಶಿಕ್ಷಕರು. ಬೆಂಗಳೂರಿನಲ್ಲಿ 2008 ಜನವರಿ 1ರಂದು ಯಾತ್ರೆ ಆರಂಭವಾಯಿತು.
ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ಉದ್ದೇಶವಿದೆ. ದುಶ್ಚಟಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಇಂದಿನ ಯುವಕರಲ್ಲಿ ಜಾಗೃತಿ ಮೂಡಿಸುವುದು ಉದ್ದೇಶ ಎನ್ನುತ್ತಾರೆ.
ಕೆಲ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿ ಆಗಿದ್ದರು. ಸೋದರಮಾವ ದುಶ್ಚಟಗಳಿಂದ ಸಾವನ್ನಪ್ಪಿದ್ದರು. ಇದು, ಜಾಗೃತಿ ಆಂದೋಲನಕ್ಕೆ ಪ್ರೇರೇಪಣೆ ಎನ್ನುತ್ತಾರೆ.
source:http://www.prajavani.net/article/%E0%B2%A6%E0%B3%81%E0%B2%B6%E0%B3%8D%E0%B2%9A%E0%B2%9F%E0%B2%97%E0%B2%B3-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%88%E0%B2%95%E0%B2%B2%E0%B3%8D-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8#.UOl53eSE1QU
No comments:
Post a Comment