Monday, December 31, 2012

ಬಸವಕಲ್ಯಾಣ ಶಾಸಕ ಅಟ್ಟೂರ ರಾಜೀನಾಮೆ


ಕೆಜೆಪಿಯೊಂದಿಗೆ ಗುರ್ತಿಸಿಕೊಂಡಿರುವ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಪಾಟೀಲ ಅಟ್ಟೂರ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ಬೋಪಯ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮೂಲಕ ರವಾನಿಸಿದ್ದಾರೆ.

ಜನಸ್ನೇಹಿ ಯಾತ್ರೆಯಲ್ಲಿ ಭಾಗವಹಿಸಲು ಬಸವಕಲ್ಯಾಣಕ್ಕೆ ಆಗಮಿಸಿದ್ದ ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶುಕ್ರವಾರ ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಟ್ಟೂರ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯ ಪ್ರಕಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಟ್ಟೂರ, 'ಬಿಜೆಪಿಯಲ್ಲಿ ಇದ್ದುಕೊಂಡು ಕೆಜೆಪಿಯ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವುದು ಸರಿಯಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆಯೇ ವಿಧಾನಸಭಾಧ್ಯಕ್ಷರಿಗೆ ಫ್ಯಾಕ್ಸ್‌ ಮೂಲಕ ರವಾನಿಸಿದ್ದೇನೆ. ಜನವರಿ 5ರಂದು ಬೆಂಗಳೂರಿನಲ್ಲಿ ಖುದ್ದಾಗಿ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಮತ್ತೂಮ್ಮೆ ರಾಜೀನಾಮೆ ಪತ್ರ ನೀಡುತ್ತೇನೆ' ಎಂದರು.
'ಯಡಿಯೂರಪ್ಪ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರು ನನ್ನನ್ನು ಗುರ್ತಿಸಿ ಬಿಜೆಪಿಯಿಂದ ಟಿಕೆಟ್‌ ನೀಡಿದ್ದಕ್ಕಾಗಿಯೇ ಇಂದು ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಷ್ಟವಿರಲಿ, ಸುಖವಿರಲಿ ನಾನು ಯಡಿಯೂರಪ್ಪ ಅವರೊಂದಿಗೆ ಇರುತ್ತೇನೆ. ಸ್ವ-ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಪ್ರತಿಕ್ರಿಯಿಸಿದರು.


ಬಿಜೆಪಿಯಲ್ಲಿ ಇದ್ದುಕೊಂಡು ಕೆಜೆಪಿಯ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವುದು ಸರಿಯಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆಯೇ ವಿಧಾನಸಭಾಧ್ಯಕ್ಷರಿಗೆ ಫ್ಯಾಕ್ಸ್‌ ಮೂಲಕ ರವಾನಿಸಿದ್ದೇನೆ.

ಬಸವರಾಜ ಪಾಟೀಲ ಅಟ್ಟೂರ, ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ.


source:http://kannada.yahoo.com/%E0%B2%AC%E0%B2%B8%E0%B2%B5%E0%B2%95%E0%B2%B2-%E0%B2%AF-%E0%B2%A3-%E0%B2%B6-%E0%B2%B8%E0%B2%95-%E0%B2%85%E0%B2%9F-%E0%B2%9F-%E0%B2%B0-214215192.html;_ylt=AsThz2cnY_eAL.Y7f9c5loVdzdIF;_ylu=X3oDMTQ3cG5sbDZzBG1pdANTZWN0aW9uIExpc3QgS2FybmF0YWthBHBrZwM4ODVjYWJkZC1hZWFhLTMxNGItODBjMi0xZDNlYTFiOGIxOWYEcG9zAzIEc2VjA01lZGlhU2VjdGlvbkxpc3QEdmVyAzcyNGIzYTAwLTUxMzctMTFlMi1hZGVmLWY2MmQxMjRlNGU3OQ--;_ylg=X3oDMTIwZGFhdXN2BGludGwDaW4EbGFuZwNrbi1pbgRwc3RhaWQDBHBzdGNhdAPgsrjgs4Hgsqbgs43gsqbgsr8EcHQDc2VjdGlvbnM-;_ylv=3

No comments:

Post a Comment