Monday, August 27, 2012

ಪಾರಂಪರಿಕ ತಾಣ ರಕ್ಷಿಸಲು ಕ್ರಿಯಾ ಯೋಜನೆ: ಡಿಸಿ



ನಗರದ ಪಾರಂಪರಿಕ ತಾಣಗಳನ್ನು ಮೂಲ ರೂಪದಲ್ಲಿ ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲು ಎಲ್ಲ ನೆರವು ಒದಗಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಧಿಕಾರಿ ನೂರ್‌ ಮನ್ಸೂರ್‌ ತಿಳಿಸಿದರು.

ಅವರು ಬುಧವಾರ ಇಂಡಿಯನ್‌ ಹೆರಿಟೇಜ್‌ ಸಿಟೀಸ್‌ ನೆಟ್‌ವರ್ಕ್‌ (ಐಎಚ್‌ಸಿಎನ್‌) ಸಂಸ್ಥೆಯ ಪ್ರತಿನಿಧಿಧಿಗಳೊಂದಿಗೆ ಜಿಲ್ಲಾಧಿಧಿಕಾರಿ ಕಚೇರಿಯಲ್ಲಿ ನಡೆಸಿದ ಸಮಾಲೋಚನೆ ಸಭೆಯಲ್ಲಿ, ನಗರದ ಪರಂಪರೆ ತಾಣಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ನಗರದ ಪರಂಪರೆ ಕುರಿತು ಲಭ್ಯ ಇರುವ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಹೇಳಿದರು.

ಐಎಚ್‌ಸಿಎನ್‌ ಸಂಸ್ಥೆಯ ಸದಸ್ಯ ಗೋವಿಂದನ್‌ ಕುಟ್ಟಿ ಮಾತನಾಡಿ, ರಾಜ್ಯದ ಬೇರೆ ಯಾವುದೇ ನಗರಗಳಿಗೆ ಹೋಲಿಸಿದರೆ ಬೀದರ ಅತಿ ಹೆಚ್ಚು ಪರಂಪರೆ ತಾಣಗಳನ್ನು ಹೊಂದಿದೆ. ನಗರದ ಒಳಗೆ ಹಲವಾರು ಪರಂಪರೆ ತಾಣಗಳು ಇದ್ದು, ಇಲ್ಲಿನ ಕಟ್ಟಡಗಳು, ಸ್ಮಾರಕಗಳು, ಮಾರುಕಟ್ಟೆ, ಮನೆಗಳು, ಕಮಾನುಗಳು, ಸಂಸ್ಕೃತಿ ಅಪಾರ ಪಾರಂಪರಿಕ ಮೌಲ್ಯ ಹೊಂದಿದೆ ಎಂದರು.

ಸಂಸ್ಥೆಯ ವತಿಯಿಂದ ಬೀದರ ನಗರದ ಪರಂಪರೆ ತಾಣಗಳನ್ನು ಸಂರಕ್ಷಿಸಲು ಮತ್ತು ಆ ಮೂಲಕ ಜನರ ಜೀವನ ಮಟ್ಟವನ್ನು ಉತ್ತಮಪಡಿಸಲು ಸಹಕಾರ ನೀಡಲಾಗುವುದು ಎಂದರು.

ಪರಂಪರೆ ತಾಣಗಳನ್ನು ಮೂಲ ರೂಪದಲ್ಲಿ ಉಳಿಸುವ ಮೂಲಕ ನಗರದ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಾಧ್ಯವಿದೆ. ಪರಂಪರೆ ತಾಣಗಳ ಸಂರಕ್ಷಣೆಯನ್ನು ಗಮನದಲ್ಲಿರಿಸಿ ನಗರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕಟ್ಟಡಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಸೇರಿದಂತೆ ನಗರದ ಮಾಸ್ಟರ್‌ ಪ್ಲಾನ್‌ ರಚಿಸುವ ಸಂದರ್ಭದಲ್ಲಿ ನಗರದ ಪಾರಂಪರಿಕ ಮೌಲ್ಯಗಳನ್ನು ಗಮನದಲ್ಲಿರಿಸಬೇಕು. ಸಂಸ್ಥೆ ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

ಐಎಚ್‌ಸಿಎನ್‌ ಸಂಸ್ಥೆಯ ಡಿ. ಪರುಮಿತಾ, ಎಎಸ್‌ಐ ಅಧಿಧಿಕಾರಿ ಆನಂದತೀರ್ಥ, ನಗರಸಭೆಯ ಇಂಜಿನಿಯರ್‌ ಮೊಯಿಸ್‌ ಹುಸೇನ್‌, ಜಿಲ್ಲಾ ನಗರಾಭಿವೃದ್ಧಿ ಶಾಖೆಯ ರಿಯಾಜ್‌, ಗಣಿ ಮತ್ತು ಭೂವಿಜ್ಞಾನ ಅಧಿಧಿಕಾರಿ ಬಸಂತ್‌ ಮತ್ತಿತರ ಅಧಿಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.





source: http://kannada.yahoo.com/%E0%B2%AA-%E0%B2%B0-%E0%B2%AA%E0%B2%B0-%E0%B2%95-%E0%B2%A4-103709198.html;_ylt=AgLFGjyyPs2SzQLEWZmF_Wjupe5_;_ylu=X3oDMTRiZzlubXVwBG1pdANCaWRhciBNb2R1bGUgU3RvcnlsaXN0BHBrZwNmOTZkZGU1NS01NTg5LTNlMWMtOThkNS03YWNjMmRkZjBlZTgEcG9zAzgEc2VjA01lZGlhU3RvcnlMaXN0TFBUZW1wBHZlcgNhOGFiYWJjMC1lZGQ3LTExZTEtYmJiYi04NTdkYTc3MzIwZGE-;_ylg=X3oDMTJldmZlNjBlBGludGwDaW4EbGFuZwNrbi1pbgRwc3RhaWQDBHBzdGNhdANob21lfOCynOCyv.CysuCzjeCysuCzhuCyl.Cys.CzgQRwdANzZWN0aW9ucw--;_ylv=3

No comments:

Post a Comment