Source: Vijaya Karnataka
ಗ್ಯಾಸ್ ಸಿಲಿಂಡರ್ ಸ್ಫೋಟ:12 ಜನ ಗಾಯ
ಹುಮನಾಬಾದ್ : ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನವಜಾತ ಶಿಶು, 7 ಜನ ಮಕ್ಕಳು ಸೇರಿ ಒಟ್ಟು 12 ಜನರು ಗಂಭೀರ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಆಯಾನ್ ಪಠಾಣ್(20 ದಿನದ )ಶಿಶು , ಮಗುವಿನ ತಾಯಿ ಶಹಾಜಾನ್‌ಬಿ, ಜೊಯಲ್ ಯುನುಸ್ ಪಠಾಣ್ (5), ಪೂಜಾ (10), ಅಜಯ್ (6), ಶೇಖ ಅಲ್ಫಿಯಾ (2), ಯುನುಸ್ (35) ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಕಳಿಸಲಾಗಿದೆ.
ಗಾಯಗೊಂಡ ಶೀತಲ್ (8), ರೇಖಾಬಾಯಿ (30), ನೀಲಾಬಾಯಿ (30), ಆಲಿಯಾ (4)ಶೇಖ ಜೈನೋದ್ದಿನ್ (45)ಗೆ ಹುಮನಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಕಲಬುರ್ಗಿ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿನ ಖಾಜಾ ಕಬ್ಬಿಣ ಹಾಗೂ ಟಯರ್ ಕಂಪನಿಯಲ್ಲಿ ಮಹಾರಾಷ್ಟ್ರ ಮೂಲದ ಬಡ ಕೂಲಿ ಕಾರ್ಮಿಕ ಕುಟುಂಬವು ಕೆಲಸ ನಿರ್ವಹಿಸುತ್ತಿದೆ. ಕಾರ್ಖಾನೆ ಆವರಣದಲ್ಲಿಯೆ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಮಧ್ಯಾಹ್ನ ಕಾರ್ಮಿಕರು ಅದೇ ಕೋಣೆಯಲ್ಲಿ ಅಡುಗೆ ತಯಾರಿ ನಡೆಸಿದ್ದರು. ಗ್ಯಾಸ್ ಸ್ಟೋವ್ ಹೊತ್ತಿಸಿದ ಕ್ಷ ಣದಲ್ಲಿಯೇ ಸ್ಫೋಟಗೊಂಡಿದ್ದು, ಕೋಣೆಯಲ್ಲಿದ್ದ ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಬೆಂಕಿ ತಗುಲಿ ಗಾಯಗಳಾಗಿವೆ.
Source: https://vijaykarnataka.indiatimes.com/district/bidar/gas-cylinder-blast-12-people-injured/articleshow/64238229.cms
" Twitter: #BidarInfo (@BidarInfo) "