Tuesday, January 27, 2015

ಬೀದರ್-ಕಲಬುರಗಿ ರೈಲುಮಾರ್ಗ ವರ್ಷದಲ್ಲಿ ಪೂರ್ಣ

:ಬೀದರ್-ಕಲಬುರಗಿ ರೈಲು ಮಾರ್ಗ ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಎಂದು ಸಂಸದ ಭಗವಂತ ಖೂಬಾ ವಿಶ್ವಾಸ ವ್ಯಕ್ತ ಪಡಿಸಿದರು. ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೈಲು ಮಾರ್ಗ ಪೂರ್ಣಗೊಂಡರೆ ಜಿಲ್ಲೆಗೆ ನಾಲ್ಕು ಹೊಸ ರೈಲುಗಳನ್ನು ಓಡಿಸಲಾಗುವುದು. ಲಾತೂರ ಹೈದರಾಬಾದ್ ಎಕ್ಸ್‌ಪ್ರೆಸ್ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೇ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿ ಜಿಲ್ಲೆಯಲ್ಲಿ 78 ಗ್ರಾಮಗಳಲ್ಲಿ ಈ ವರ್ಷ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ಸಣ್ಣ ನೀರಾವರಿ ಯೋಜನೆಯಡಿ ಕೇಂದ್ರದಿಂದ 69 ಕಾಮಗಾರಿಗಳಿಗೆ ಮಂಜೂರಾತಿ ಸಿಕ್ಕಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ದೀನ ದಯಾಳ ಉಪಾಧ್ಯಾಯರ ಗ್ರಾಮಜ್ಯೋತಿ ಯೋಜನೆಯಿಂದ ಪ್ರತಿಯೊಂದು ಮನೆಗೆ ಮತ್ತು ಪ್ರತಿಯೊಂದು ರೈತರ ಪಂಪ್‌ಸೆಟ್‌ಗೆ ಉತ್ತಮ ಗುಣಮಟ್ಟದ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ.

ಈ ಯೋಜನೆಯಿಂದ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವ ಕಾರ್ಯಕ್ರಮವಿದೆ. ರಾಜ್ಯ ಸರಕಾರದ ಜೆಸ್ಕಾಂ ಇಲಾಖೆಯ ಸಹಯೋಗದೊಂದಿಗೆ ಕೇಂದ್ರದಿಂದ ನೇರವಾಗಿ ಜಿಲ್ಲೆಗೆ 400 ಕೋಟಿ ರೂ. ಯೋಜನೆಯಿಂದ ಉತ್ತಮ ಗುಣಮಟ್ಟದ ವಿದ್ಯುತ್ ನೀಡಲಾಗುವುದು. ಅಲ್ಲದೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೌಶಲ್ಯ ಅಭಿವದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶಿವಾಜಿರಾವ ಜಾಧವ, ಕಿಶನರಾವ ಜಾಧವ, ಶಿವಕುಮಾರ ಘಂಟೆ, ಅಶೋಕ ವಾಲೆ ಇದ್ದರು.

source:http://vijaykarnataka.indiatimes.com/articleshow/46021348.cms

No comments:

Post a Comment