ಬೀದರ: ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿಗೆ ತಾಲೂಕಿನ ಬಗದಲ್ ಗ್ರಾಮದ ರೈತ ಜನಾಬ್ ಅಲ್ ಹಜ್ ಮಹಮ್ಮದ್ ಇದ್ರೀಸ್ ಖಾದ್ರಿ ಸಾಹೇಬ್ ಪಾತ್ರರಾಗಿದ್ದಾರೆ.
ಬೆಂಗಳೂರಿನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ರೈತ ಇದ್ರೀಸ್ ಖಾದ್ರಿ ಸಾಹೇಬ್ ಅವರು ರಾಜ್ಯದಲ್ಲಿಯೆ ಅತಿ ಹೆಚ್ಚಿನ ಅಂಕಗಳನ್ನು ಪಡೆದವರಾಗಿದ್ದು, ಇದು ಜಿಲ್ಲೆಯ ರೈತರಿಗೆ ಸಂದ ಗೌರವವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
No comments:
Post a Comment