ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಅನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾರ್ಯವನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ.
ಗಡಿ ಪ್ರವೇಶದ ಭಂಗೂರ ಗ್ರಾಮದಿಂದ ರಾಜೇಶ್ವರ ವರೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗಿದೆ. ಮಾವು, ಆಲ, ನೀಲಗಿರಿ ಜಾತಿಯ ಮರಗಳು ಧರೆಗುರುಳಿಸುತ್ತಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟುಮಾಡಿದೆ.
ಹೆದ್ದಾರಿ ಮಧ್ಯದಿಂದ 25 ಮೀಟರ್ ವಿಸ್ತೀರ್ಣದ ಅಂತರದಲ್ಲಿ ಬರುವ ಎರಡು ಬದಿಯ ಎಲ್ಲಾ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭಂಗೂರ ಗ್ರಾಮದಿಂದ ರಾಜೇಶ್ವರವರೆಗೆ ವಿವಿಧ ಬಗೆಯ ಮರಗಳನ್ನು ಕಡಿಯಲಾಗುತ್ತಿದೆ.
25 ಮೀಟರ್ ಅಂತರದಿಂದ ಹೊರಗೆ ಉಳಿದ ಮರಗಳು ಆ ಭೂಮಿ ಒಡೆತನದ ರೈತರಿಗೆ ಉಳಿಯಲಿವೆ’ ಎಂದು ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಠ ಮಾಹಿತಿ ನೀಡಿದ್ದಾರೆ. ಚತುಷ್ಪಥ ರಸ್ತೆಯು ರಸ್ತೆ ನಿರ್ಮಾಣ ಕಾರ್ಯದ ಬಳಿಕ ಅರಣ್ಯ ಇಲಾಖೆಯು ಹೆದ್ದಾರಿಯ ಎರಡು ಬದಿಗಳಲ್ಲಿ ವಿವಿಧ ತಳಿಯ ಹೊಸ ಸಸಿಗಳು ನೆಡಲಾಗುತ್ತದೆ ಎಂದರು.
No comments:
Post a Comment