Saturday, August 24, 2013

ಬೀದರ್‌-ಬೆಂಗಳೂರು ರೈಲು ಸೆ.1ಕ್ಕೆ ಆರಂಭ"

ಬೀದರ್‌-ಬೆಂಗಳೂರು ರೈಲು ಸೆ.1ಕ್ಕೆ ಉದಯವಾಣಿ ದೆಹಲಿ ಪ್ರತಿನಿಧಿಯಿಂದ: ಬಹು ನಿರೀಕ್ಷಿತ ಬೀದರ್‌-ಬೆಂಗಳೂರು ರೈಲು ಸಂಚಾರ ಸೆಪ್ಟೆಂಬರ್‌ 1ರಿಂದ ಆರಂಭವಾಗಲಿದೆ ಎಂದು ಬೀದರ್‌ ಸಂಸದ, ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ದೆಹಲಿಯಲ್ಲಿ ತಿಳಿಸಿದರು. ಬೀದರ್‌-ಬೆಂಗಳೂರು ನಡುವಣ ರೈಲು ಸಂಚಾರ ಅಲ್ಲಿನ ಜನರ ಬಹುದಿನ ಬೇಡಿಕೆ. ಇದೀಗ ಈ ರೈಲು ಯಾನಕ್ಕೆ ರೈಲ್ವೇ ಇಲಾಖೆ ಹಸಿರು ನಿಶಾನೆ ತೋರಿದ್ದು ವಾರದಲ್ಲಿ ಮೂರು ದಿನ ಈ ರೈಲು ಓಡಲಿದೆ ಎಂದು ಹೇಳಿದರು. ರೈಲು ಸಂಚಾರ ಆರಂಭಕ್ಕೆ ಆಸಕ್ತಿ ತೋರಿಸಿದ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ಸಲ್ಲಿಸಿದ ಅವರು, ಗುಲ್ಬರ್ಗಾ - ಬೀದರ್‌ ರೈಲಿನ ಕನಸು ಕೂಡ ಶೀಘ್ರದಲ್ಲೆ ಈಡೇರಲಿದೆ ಎಂದರು.


source:http://kannada.yahoo.com/%E0%B2%AC-%E0%B2%A6%E0%B2%B0-%E0%B2%AC-%E0%B2%97%E0%B2%B3-%E0%B2%B0-%E0%B2%B0-%E0%B2%B2-%E0%B2%B8-174028136.html