Wednesday, June 12, 2013

'Madhavrao (Raju) Patil' memorial Cricket tournament in Bidar"Madhavrao (Raju) Patil" memorial T-10  cricket tournament organized by Madhav Group in Nehru stadium Bidar
Dates 10, 11, 12 June 2013.
Entry Free.
Venue- Nehru stadium Bidar


ಬೀದರ: ಕ್ರಿಕೆಟಿಗರ ಪ್ರತಿಭೆ ಗುರುತಿಸಲು ಪಂದ್ಯಾವಳಿಗಳ ಆಯೋಜನೆ ಅತಿ ಅವಶ್ಯಕ ಎಂದು ಜಿಪಂ ಮಾಜಿ ಅಧ್ಯಕ್ಷ ಕುಶಾಲರಾವ ಪಾಟೀಲ ಗಾದಗಿ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಮಾಧವರಾವ (ರಾಜು) ಪಾಟೀಲ ಸ್ಮರಣಾರ್ಥ ಮಾಧವ ಗ್ರೂಪ್‌ ಆಯೋಜಿಸಿರುವ ನಿಗದಿತ 10ಓವರಗಳ ಕ್ರಿಕೆಟ್‌ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಕೆಟ್‌ ಆಟಕ್ಕೆ ಬೆಲೆ ಹೆಚ್ಚುತ್ತಿದೆ. ಇದರಿಂದ ಕ್ರೀಡಾಪಟುಗಳು ಹೊರಹೊಮ್ಮುತ್ತಿರುವುದು ಸಂತಸ ಎಂದರು. ವಕೀಲ ಸಂಘದ ಜಿಲ್ಲಾಧ್ಯಕ್ಷ ರಾಮಚಂದ್ರ ಗಂದಗೆ ಮಾತನಾಡಿ, ನಾವು ಮಾಡಿರುವ ಕೆಲಸ ಗುರುತಿಸುವುದು ತುಂಬ ಪ್ರಾಮುಖ್ಯ. ಮಾಧವರಾವ ಪಾಟೀಲ ದೇಹ ನಮ್ಮೊಂದಿಗಿಲ್ಲ, ಆದರೆ ಅವರ ಕಾರ್ಯ ಮಕ್ಕಳಿಗೆಲ್ಲರಿಗೆ ಉತ್ಸಾಹದ ಚಿಲುಮೆಯಾಗಿದೆ. ನಾವು ಎಂಥ ಬೀಜ ಬಿತ್ತುತ್ತೆವೋ ಅಂಥ ಬೆಳೆ ಪಡೆಯಲು ಸಾಧ್ಯ ಎಂದರು. ಕಾರ್ಯದರ್ಶಿ ಮಹೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಕ್ರಿಕೆಟ್‌ ಮುಖ್ಯವಾಹಿನಿಗೆ ಸೆಳೆದು ಅವರೆಲ್ಲರನ್ನು ಹುರಿದುಂಬಿಸುವುದು, ಯುವಶಕ್ತಿ ಜಿಲ್ಲೆಯಶಕ್ತಿ, ಯುವಕಶಕ್ತಿ ಪೋಲಾಗದಂತೆ ಅವರನ್ನು ಜಾಗೃತಿಗೊಳಿಸುವುದು, ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿ ಕ್ರೀಡಾಕೂಟ ಚಟುವಟಿಕೆಗಳಿಗೆ ಸಹಕರಿಸುವ ಉದ್ದೇಶ ನಮ್ಮದಾಗಿದೆ. ಇಂದು ಪ್ರಥಮ ಹಂತವಾಗಿ ಕ್ರಿಕೆಟ್‌ ಟೂರ್ನಮೆಂಟ್‌ ಆಯೋಜಿಸಿದೆ ಎಂದರು. ಹಾವಗಿರಾವ ಪಾಟೀಲ ಅಧ್ಯಕ್ಷತೆ ಮತ್ತು ಶಿವರಾಜ ಪಾಟೀಲ ಸಮ್ಮುಖ ವಹಿಸಿದ್ದರು. ಸ್ಕೋರರ್‌ ಆಗಿ ಕೇದರನಾಥ, ವೀಕ್ಷಕ ವಿವರಣೆಗಾರರಾಗಿ ವಿನಾಯಕ ಕುಲಕರ್ಣಿ, ಅಂಪೈರ್‌ಗಳಾಗಿ ವಸಂತ ಕುಲಕರ್ಣಿ, ಬಸವರಾಜ ಬಿರಾದಾರ ಕೆಲಸ ನಿರ್ವಹಿಸಿದರು. ಬೀದರ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಸಂಜಯ ಜಾಧವ ಸ್ವಾಗತಿಸಿದರು. ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶಂಕರ ಟೋಕರೆ ನಿರೂಪಿಸಿದರು. ಕಾರ್ಯದರ್ಶಿ ಅನೀಲ ದೇಶಮುಖ ವಂದಿಸಿದರು.
source:http://kannada.yahoo.com/%E0%B2%95-%E0%B2%B0-%E0%B2%95-%E0%B2%9F-%E0%B2%AA-%E0%B2%A6-%E0%B2%AF-%E0%B2%B5%E0%B2%B3-075556184.html;_ylt=AiT_86WEs20N_AOUlfDH8Efupe5_;_ylu=X3oDMTRiZmdzN2kwBG1pdANCaWRhciBNb2R1bGUgU3RvcnlsaXN0BHBrZwM5MDc0OWMyMS0zODVhLTNmODctOTNiNi1mMTI5NzRiOWU4ZDgEcG9zAzQEc2VjA01lZGlhU3RvcnlMaXN0TFBUZW1wBHZlcgNlM2YxYzgxMS1kMzNmLTExZTItYmI1ZC1hNTc1NDBkODM4ODY-;_ylg=X3oDMTJzYm02M3ZnBGludGwDaW4EbGFuZwNrbi1pbgRwc3RhaWQDBHBzdGNhdAPgsrjgs4Hgsqbgs43gsqbgsr984LKc4LK_4LKy4LON4LKy4LOG4LKX4LKz4LOBBHB0A3NlY3Rpb25z;_ylv=3