Tuesday, May 7, 2013

PUC passing percentage increased this time.


ಪಿಯುಸಿ: 44 ಕಾಲೇಜುಗಳಲ್ಲಿ ಸೊನ್ನೆ ಫಲಿತಾಂಶ

ಮತ್ತೆ ಬಾಲಕರನ್ನು ಹಿಂದಿಕ್ಕಿ ಬೀಗುತ್ತಿರುವ ಬಾಲಕಿಯರು. ಪ್ರಕಾಶಿಸಿದ ಗ್ರಾಮೀಣ ಪ್ರತಿಭೆಗಳು. ಪ್ರದೇಶವಾರು ಸಾಧನೆಯಲ್ಲಿ ಸ್ಥಿರತೆ- ಇದು ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದ ಪ್ರಮುಖಾಂಶ. ಒಟ್ಟಾರೆ ಶೇ. 59.36 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 2.33 ರಷ್ಟು ಹೆಚ್ಚಳವಾಗಿದೆ. ಇದು ದ್ವಿತೀಯ ಪಿಯುಸಿ ಇತಿಹಾಸದಲ್ಲಿ ದಾಖಲೆಯೂ ಹೌದು. ವಿಜ್ಞಾನ ಶೇ. 61.46, ವಾಣಿಜ್ಯ ಶೇ. 67.86 ಹಾಗೂ ಕಲಾ ಸಂಯೋಜನೆಯಲ್ಲಿ ಶೇ. 51.76 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿಜ್ಞಾನದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ಅಕ್ಷಯ್ ಕಾಮತ್ (594 ಅಂಕ), ವಾಣಿಜ್ಯದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸೂರಜ್ ಹೆಗಡೆ (593 ಅಂಕ) ಹಾಗೂ ಕಲಾ ಸಂಯೋಜನೆಯಲ್ಲಿ ಬಾಗಲಕೋಟದ ಬಿಎಂಎಸ್‌ಆರ್ ವಸ್ತ್ರದ ಪಿಯು ಕಾಲೇಜಿನ (ಹುನಗುಂದ)ಪ್ರದೀಪ್ ಗೊರೇಬಾಳ (574 ಅಂಕ) ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಾರ್ಚ್ 13 ರಿಂದ 28 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಾಗಿತ್ತು. ಹಾಜರಾದ 6,11,569 ವಿದ್ಯಾರ್ಥಿಗಳಲ್ಲಿ 3,63,057 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 21,907 (ಶೇ.6.03)ಉನ್ನತ ಶ್ರೇಣಿ, 1,64,315 (ಶೇ.45.26) ಪ್ರಥಮ ದರ್ಜೆ, ದ್ವಿತೀಯ ದರ್ಜೆ 90,413 (ಶೇ.24.90) ಹಾಗೂ 86,422 (ಶೇ.23.80) ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ (ಶೇ.73.42) ಅತಿ ಹೆಚ್ಚು ಫಲಿತಾಂಶ ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಅನುದಾನ ರಹಿತ (ಶೇ.72.49), ಕಾರ್ಪೊರೇಷನ್ (ಶೇ.69.23), ಅನುದಾನಿತ (ಶೇ.67.66), ಸರಕಾರಿ ಪದವಿ ಪೂರ್ವ ಕಾಲೇಜುಗಳಿವೆ (ಶೇ.65.80). 44 ಕಾಲೇಜುಗಳು ಸೊನ್ನೆ ಸುತ್ತಿದ್ದು, ಇವೆಲ್ಲವೂ ಅನುದಾನ ರಹಿತವಾಗಿವೆ. ಇನ್ನು 21 ಸರಕಾರಿ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ.

ದ್ವಿತೀಯ ಪಿಯುಸಿ ಫಲಿತಾಂಶದ ವಿವರ

* ಒಟ್ಟಾರೆ ಫಲಿತಾಂಶ : ಶೇ. 59.36
* ಬಾಲಕರು : ಶೇ. 52.72
* ಬಾಲಕಿಯರು : ಶೇ. 66.51
* ವಿಜ್ಞಾನ : ಶೇ. 61.46
* ವಾಣಿಜ್ಯ : ಶೇ. 67.86
* ಕಲೆ : ಶೇ. 51.76
* ಹಾಜರಾದವರು : 6,11,569
* ಪಾಸಾದವರು : 3,63,057
* ಉನ್ನತ ಶ್ರೇಣಿ : 21,907
* ಪ್ರಥಮ ದರ್ಜೆ : 1,64,315
* ದ್ವಿತೀಯ ದರ್ಜೆ : 90,413
* ತೃತೀಯ ದರ್ಜೆ : 86,422

ಮಾಧ್ಯಮವಾರು....
* ಕನ್ನಡ : ಶೇ. 54.33
* ಇಂಗ್ಲಿಷ್ : ಶೇ. 64.00

ನಗರ - ಗ್ರಾಮೀಣ ಸಾಧನೆ
* ನಗರ : ಶೇ. 58.79
* ಗ್ರಾಮೀಣ : ಶೇ. 61.21

Source:http://vijaykarnataka.indiatimes.com/articleshow/19914074.cms

No comments:

Post a Comment