Thursday, October 11, 2012

ಇಂಡೋ-ನೇಪಾಲ ಕ್ರಿಕೆಟ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆ



ಕಠ್ಮಂಡುವಿನಲ್ಲಿ ನವೆಂಬರ 22ರಿಂದ ಮೂರು ದಿನ ನಡೆಯಲಿರುವ ಇಂಡೋ-ನೇಪಾಲ ಅಂತಾರಾಷ್ಟ್ರೀಯ ಟೆನಿಸ್‌ ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ಗೆ ಬೀದರ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಭಾರತ ತಂಡವನ್ನು ಪ್ರತಿನಿಧಿಧಿಸಲಿದ್ದಾರೆ.

ವಿದ್ಯಾಲಯದ 7 ಬಾಲಕರು ಮತ್ತು 7 ಬಾಲಕಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಟೆನಿಸ್‌ ಬಾಲ ಕ್ರಿಕೆಟ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ವಿದ್ಯಾಲಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ತರಬೇತಿದಾರ ರಾಜಕುಮಾರ ಹಲಬರ್ಗೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಪ್ರೊ| ಪೂರ್ಣಿಮಾ ಜಿ. ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಆದರೆ, ಕ್ರೀಡಾ ಮನೋಭಾವ ಹೊಂದುವುದು ಮುಖ್ಯ ಎಂದರು.

ನಿರ್ದೇಶಕರಾದ ಚಂದ್ರಶೇಖರ ಪಾಟೀಲ, ಸುಮಿತ ಸಿಂದೋಲ್‌, ರವಿ ಮೂಲಗೆ, ಪ್ರಾ|ಸುನೀತಾ ಸ್ವಾಮಿ, ಶಿಕ್ಷಕರಾದ ಉಮಾಕಾಂತ ಬಲಾಡೆ, ಮಹೇಶ ಯಾಲಾ, ವ್ಯವಸ್ಥಾಪಕ ಸಂಜೀವ ರಾಠೊಡ ಉಪಸ್ಥಿತರಿದ್ದು, ಅಭಿನಂದಿಸಿದರು.




source:http://kannada.yahoo.com/%E0%B2%87-%E0%B2%A1-%E0%B2%A8-%E0%B2%AA-%E0%B2%B2-104622460.html;_ylt=AsSfWkZ6.t2vPSAC67BHefvupe5_;_ylu=X3oDMTRiMXNqNzhjBG1pdANCaWRhciBNb2R1bGUgU3RvcnlsaXN0BHBrZwNlOGU1M2IxZC04MWY4LTM2OTAtYTFjNy1hMDc5MzU1MDMxMzQEcG9zAzEEc2VjA01lZGlhU3RvcnlMaXN0TFBUZW1wBHZlcgNiYjkzYmU3MC0xMmM3LTExZTItYjdmZi03ODQ4YTBmMTY5OTk-;_ylg=X3oDMTJldmZlNjBlBGludGwDaW4EbGFuZwNrbi1pbgRwc3RhaWQDBHBzdGNhdANob21lfOCynOCyv.CysuCzjeCysuCzhuCyl.Cys.CzgQRwdANzZWN0aW9ucw--;_ylv=3

No comments:

Post a Comment